Sunday, 30 May 2021

ಪ್ರಕೃತಿಯ ಕಣ್ಮಣಿಗಳು - ೧


ನಮಸ್ಕಾರ, 
ಈ ಬಾರಿ ನಮ್ಮ ಪಯಣವನ್ನು  ಹಸಿರು ಸಾಮ್ರಾಜ್ಯದ  ಪುಷ್ಪಮಿತ್ರರ ಭೇಟಿಗಾಗಿ ಆಯೋಜಿಸಲಾಗಿದೆ!! 
ಕೋಳಿ ಮೊಟ್ಟೆಯನ್ನು ನಾವೆಲ್ಲಾ ನೋಡಿರುತ್ತೇವೆ. ಮೊಟ್ಟೆಯಿಂದ ಕೋಳಿ ಮರಿಯೆ ಹೊರಬರುತ್ತದೆ ತಾನೇ? 
ಆದರೆ ಚಿಟ್ಟೆಯ ಮೊಟ್ಟೆ ಯಿಂದ  ಚಿಟ್ಟೆ ಯೇ ಹೊರಬರುವುದಿಲ್ಲ..ಬದಲಾಗಿ caterpillar ಕಂಬಳಿ ಹುಳು  ಅಥವಾ ಸುಂಗ್ನ ಹುಳು ಎಂದು ಕರೆಯಲ್ಪಡುವ ಜೀವಿಯು ಹೊರಬರುತ್ತದೆ.
ಕೇವಲ ಚಿಟ್ಟೆ ಯೊಂದೆ ಅಲ್ಲ ಸಾಮಾನ್ಯವಾಗಿ ಎಲ್ಲ ಕೀಟಗಳು ಈ ಹಂತವನ್ನು ಹೊಂದುತ್ತವೆ.
ಚಿಟ್ಟೆಗಳ ಜೀವನ ಚಕ್ರದಲ್ಲಿ(life cycle) ನಾಲ್ಕು ಹಂತಗಳಿವೆ. ಮೊದಲನೆಯದು ಮೊಟ್ಟೆ (egg) ನಂತರ ಲಾರ್ವ ಅಂದರೆ ಹುಳು(caterpillar), ಪೊರೆಹುಳು(pupa),ಕೊನೆಯದೆ ಚಿಟ್ಟೆಯ ರೂಪ.
      
     ಚಿಟ್ಟೆಯ ಮೊಟ್ಟೆಗಳ ಆಕಾರ , ಬಣ್ಣ ಗಳಲ್ಲಿ ಜಾತಿಯಿಂದ ಜಾತಿಗೆ (species to species)
ವ್ಯತ್ಯಾಸವಿರುತ್ತದೆ. ಹುಳುವಿಗೆ  ಆಹಾರ ವಾಗುವ ಸಸ್ಯದ ಎಲೆಯ ಮೇಲೆ ಚಿಟ್ಟೆಯು ತನ್ನ ಮೊಟ್ಟೆಗಳನ್ನು ಇಡುತ್ತದೆ. ಈ ಚಿಕ್ಕ ಚಿಕ್ಕ ಮೊಟ್ಟೆಗಳೇ ಲಾರ್ವಗಳ ಕುಂಭಕರ್ಣ ಹಸಿವಿಗೆ starter ಆಗುತ್ತವೆ.
       ಬೆಳೆಸಿದ ಗಿಡದ ಎಲೆಯನ್ನಲ್ದೆ , ಮೊಗ್ಗುಗಳನ್ನು ತಿಂದು, ಮನೆಯೋಡತಿಯ ಬೈಗುಳವನ್ನು ಪಡೆಯುವುದು ಈ ಲಾರ್ವಗಳ ಹಸಿವನ್ನು ತಿಳಿಸುತ್ತದೆ. ಇವು ಸಹ ತಮ್ಮ ಜಾತಿಗನುಸಾರವಾಗಿ ವಿವಿಧ ಬಣ್ಣಗಳಲ್ಲಿ ಕಂಡುಬರುತ್ತವೆ.. ಪ್ರಕೃತಿಯೇ ಹಾಗೆ ಸಹಸ್ರಾರು ಕೋಟಿವರ್ಷಗಳಿಂದ  ಗಳಿಸುತ್ತಾ ಇರುವ ಅನುಭವವನ್ನು ಈ ರೀತಿಯಾಗಿ ಪರೀಕ್ಷಿಸುತ್ತದೆ.
       ಮೈತುಂಬ ಕಂಬಳಿಯನ್ನು ಹೊದ್ದಿವೆಯೇನೋ ಎನ್ನುವ ಹಾಗೆ ಕಾಣುವ ಹುಳು, ಮಣ್ಣಿನ ಬಣ್ಣವನ್ನು ಬಾಡಿಗೆಗೆ ಪಡೆದಂತಿರುವ ಹುಳು, ಒಮ್ಮೊಮ್ಮೆ ಇಂತಹ ವಿಚಿತ್ರ ಆಕಾರವನ್ನು ಸುಂದರ ಚಿಟ್ಟೆಯ ರೂಪದಲ್ಲಿ ಕಲ್ಪಿಸುವುದು ಅಸಾಧ್ಯ..ಹಾಗಾಗಿಯೇ ಹೇಳುವುದು,
Appearances are deceptive. 
    ಅಂದಹಾಗೆ  ಈ ಬಣ್ಣದ ರೆಕ್ಕೆಯ ಓಡೆಯರಲ್ಲಿ  ಎರಡು ಪ್ರಮುಖ ಬೇಧಗಳಿವೆ..
ಪತಂಗಗಳು(moths) ಮತ್ತು ಚಿಟ್ಟೆಗಳು(butterflies). ಪತಂಗಗಳು ಸಾಮಾನ್ಯವಾಗಿ ಗಾಢವಾದ ಬಣ್ಣಗಳನ್ನು ಹೊಂದಿರುತ್ತವೆ. ಇವುಗಳ ಸ್ಪರ್ಶ್ಟತಂತುಗಳು ಅಗಲ ವಾಗಿದ್ದು, ಕಡಿಮೆ ಉದ್ದವನ್ನು ಹೊಂದಿರುತ್ತವೆ. ವಿಶ್ರಮಿಸುವಾಗ ತಮ್ಮ ರೆಕ್ಕೆಗಳನ್ನು ಬಿಚ್ಚಿರುತ್ತವೆ. ಆದರೆ ಚಿಟ್ಟೆಗಳು ತಮ್ಮ ರೆಕ್ಕೆಗಳನ್ನು ಮುಚ್ಚಿ ವಿಶ್ರ ಮಿಸುತ್ತವೆ. ಪತಂಗ ರಾತ್ರಿಯ ವೇಳೆ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ರೂಪಾಂತರದ ಸಮಯದಲ್ಲಿ (pupal stage) ಚಿಟ್ಟೆಗಳು ನಯವಾದ ಸ್ವಲ್ಪ ಹೊಳೆಯುವ ಪೊರೆಯನ್ನು(chrysalis) ಸೃಷ್ಟಿ ಸುತ್ತವೆ... 
 ( ಮೊದಲನೆಯದು blue tiger moth, 
    ಎರಡನೆಯದು common evening brown)
  
  ನಮಗೆ ನಮ್ಮ ಬಾಲ್ಯದ ಎಲ್ಲ ನೆನಪುಗಳು ಇರುವುದಿಲ್ಲ... ತಾಯಿಯ ಗರ್ಭದ ನೆನಪುಗಳೂ ಇರುವುದಿಲ್ಲ. ಹಾಗಾದರೆ ನೆಲದ ಮೇಲೆ ತೆವಳುವ ಹುಳವು ಚಿಟ್ಟೆಯಾದ ಮೇಲೆ ಚಿಟ್ಟೆ ಗೆ  ನೆನಪುಗಳು ಇರುತ್ತವೆಯೆ?
   ಎಲೆಗಳನ್ನು ತಿನ್ನುತ್ತಾ ನಿಧಾನವಾಗಿ ತೆವಳುವ caterpillar  ಹಾರುವ ಚಿಟ್ಟೆಯಾಗಿ ಬದಲಾಗಬೇಕಾದರೆ ಅದೆಷ್ಟು ಕ್ರಿಯೆಗಳು ಚಿಕ್ಕ ದೇಹದಲ್ಲಿ ನಡೆಯಬೇಕು?!
  ತನ್ನನು ತಾನು ರಕ್ಷಿಸಿಕೊಳ್ಳಲು  ಇಂತಹ ಸೂಕ್ಷ್ಮ ಜೀವಿಗಳಿಗೆ ಪ್ರಕೃತಿ ಏನನ್ನು ನೀಡಿದೆ ?
ಇಂತಹ  ಹಲವಾರು ಪ್ರಶ್ನೆಗಳಿಗೆ ಮುಂದಿನ ಬಾರಿ ಉತ್ತರ ಹುಡುಕೋಣ... :-)